ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ದೋಗ್ರ ಪೂಜಾರಿ ಪ್ರಶಸ್ತಿ ಪಾತ್ರರು - ಕೊಕ್ಕಡ ಈಶ್ವರ ಭಟ್‌

ಲೇಖಕರು : ಎಲ್‌. ಎನ್‌. ಭಟ್‌ ಮಳಿಯ
ಬುಧವಾರ, ಜುಲೈ 17 , 2013
`
ತೆಂಕು -ಬಡಗು ತಿಟ್ಟುಗಳ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ಸುಮಾರು 5 ದಶಕಗಳ ಕಾಲ ಸೇವೆ ಸಲ್ಲಿಸಿ ಈಗ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಬಳಿ ಪಟ್ರಮೆಯಲ್ಲಿ ನಿವೃತ್ತ ಜೀವನ ಕಳೆಯುತ್ತಿರುವ ಈಶ್ವರ ಭಟ್ಟರ ಕಲಾಸೇವೆ ಉಲ್ಲೇಖ ನೀಯವಾದುದು. 1941ರಲ್ಲಿ ಜನಿಸಿದ ಭಟ್ಟರು 6ನೇ ತರಗತಿಯ ಶೈಕ್ಷಣಿಕ ವಿದ್ಯಾಭ್ಯಾಸದ ಬಳಿಕ ಯಕ್ಷಗಾನದತ್ತ ಆಕರ್ಷಿತರಾಗಿ ಅಧ್ಯಯನಕ್ಕೆ ಮುಂದಾದರು. ಪೆರುವೋಡಿ ನಾರಾಯಣ ಭಟ್‌ ಮತ್ತು ಕುಡಾನ ಗೋಪಾಲ ಕೃಷ್ಣ ಭಟ್‌ ಇವರ ಗುರುಗಳು. ದಯಾನಂದ ನಾಗೂರು, ಈಶ್ವರ ಭಟ್ಟರ ಬಡಗುತಿಟ್ಟು ನಾಟ್ಯ ಗುರುಗಳು.

ಕೊಕ್ಕಡ ಈಶ್ವರ ಭಟ್‌
ಮೂಲ್ಕಿ, ಸುರತ್ಕಲ್‌, ಕದ್ರಿ, ಕುಂಬಳೆ, ಬಪ್ಪನಾಡು, ಎಡನೀರು, ಶಿರಸಿ, ಸಾಲಿಗ್ರಾಮ, ಇಡಗುಂಜಿ ಮೇಳಗಳಲ್ಲಿ ತಿರುಗಾಟ ಮಾಡುತ್ತ ಉಭಯ ತಿಟ್ಟುಗಳ ಯಶಸ್ವೀ ಸ್ತ್ರೀ ಪಾತ್ರಧಾರಿ ಎಂಬ ಖ್ಯಾತಿಗೆ ಪಾತ್ರರಾದವರು. ದಮಯಂತಿ, ಚಂದ್ರ ಮತಿ ಇತ್ಯಾದಿ ಪಾತ್ರಗಳನ್ನು ಘನತೆ ಯಿಂದ ಕಟ್ಟಿಕೊಡುವ, ಪ್ರಮೀಳೆ, ಶಶಿಪ್ರಭೆ ಮೊದಲಾದ ಪಾತ್ರಗಳನ್ನೂ ಅಷ್ಟೇ ಸಮರ್ಥ ವಾಗಿ ನಿರ್ವಹಿಸಬಲ್ಲ ಯೋಗ್ಯತಾವಂತ ಕಲಾವಿದ ಇವರು. ಸ್ತ್ರೀ ಪಾತ್ರಕ್ಕೆ ಬೇಕಾದ ಸುಂದರ ಮುಖಾರವಿಂದ ಇವರಿಗೆ ಜನ್ಮಜಾತ. ಉತ್ತಮ ನಾಟ್ಯ, ಮಧುರ ಮಾತು ಗಾರಿಕೆ, ಒಳ್ಳೆಯ ಅಭಿನಯ, ಸಹ ಪಾತ್ರಧಾರಿಗಳೊಂದಿಗೆ ಸ್ಫೂರ್ತಿದಾಯಕ ಪಾಲ್ಗೊಳ್ಳುವಿಕೆ ಇವರ ಆಸ್ತಿ.

ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ಗೌರವ, ಕೋಟ ವೈಕುಂಠ ಪ್ರಶಸ್ತಿ, ಕೀಲಾರು ಪ್ರತಿಷ್ಠಾನದ ಸಮ್ಮಾನ ಸಹಿತ ಅನೇಕ ಪುರಸ್ಕಾರಗಳು ದೊರೆತಿವೆ.

ಯಕ್ಷಗಾನ ಕಲಾವಿದರಾಗಿ, ಮೇಳದ ಸಂಚಾಲಕರಾಗಿ, ತಾಳಮದ್ದಳೆ ಸಂಘಗಳ ಸ್ಥಾಪಕರಾಗಿ ಬಹುಮುಖೀ ಯಕ್ಷಗಾನ ಕಲಾಸೇವೆ ಮಾಡಿದ ಕೀರ್ತಿಶೇಷ ಬೋಳೂರು ದೋಗ್ರ ಪೂಜಾರಿ ಸ್ಮರಣೆಯ ಪ್ರಶಸ್ತಿ ಕೊಕ್ಕಡ ಈಶ್ವರ ಭಟ್ಟರಿಗೆ ಇದೇ ಜು.17ರಂದು ಮಂಗಳೂರು ಪುರಭವನದಲ್ಲಿ ಪ್ರದಾನ ವಾಗಲಿದ್ದು , ಇದೇ ಸಂದರ್ಭ ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ಜರಗಲಿದೆ.



ಕೃಪೆ : http://udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Soorya(7/22/2013)
congrats




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ